Health & Environment
ಬಾಗಲಕೋಟೆಯಲ್ಲಿ ಮಳೆ ಅವಾಂತರ: ಸಿಡಿಲು ಮತ್ತು ವಿದ್ಯುತ್ ತಂತಿ ಬಿದ್ದು ಮೂವರು ಸಾವು

ಬಾಗಲಕೋಟೆಯಲ್ಲಿ ಮಳೆ ಅವಾಂತರ: ಸಿಡಿಲು ಮತ್ತು ವಿದ್ಯುತ್ ತಂತಿ ಬಿದ್ದು ಮೂವರು ಸಾವು

tv9kannada1h
THE BRIEF
1

ಬಾಗಲಕೋಟೆ ಜಿಲ್ಲೆಯಲ್ಲಿ ಸುರಿದ ಮಳೆಗೆ ಸಿಡಿಲು ಬಡಿದು ಹಾಗೂ ವಿದ್ಯುತ್ ತಂತಿ ತುಂಡಾಗಿ ಬಿದ್ದು ಒಟ್ಟು ಮೂವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

2

ಬಾದಾಮಿ ತಾಲೂಕಿನ ಐಹೊಳೆಯಲ್ಲಿ ಹೊಲದಲ್ಲಿ ಬೆಳೆಯ ರಾಶಿ ಮಾಡಲು ತೆರಳಿದ್ದ ರಾಮವ್ವ ಹಾಗೂ ಅವರ ಮೊಮ್ಮಗ ಬರಮಪ್ಪ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

3

ಮತ್ತೊಂದು ಘಟನೆಯಲ್ಲಿ ಬಾಗಲಕೋಟೆ ನಗರದ ಕಿಲ್ಲಾ ಓಣಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಮರ ಬಿದ್ದು ವಿದ್ಯುತ್ ತಂತಿ ಮೈಮೇಲೆ ಬಿದ್ದ ಪರಿಣಾಮ ಬೈಕ್ ಹಿಂಬದಿ ಸವಾರ ಹಾಜಿಮಲಂಗ್ ಸಾವು ಕಂಡಿದ್ದಾರೆ.