
ರಾಜ್ಯದ ಪ್ರಮುಖ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ನಲ್ಲಿ ನಿಗದಿತ ಶೇ. 20ರ ಬದಲು ಶೇ. 31.2 ರಷ್ಟು ಎಥೆನಾಲ್ ಮಿಶ್ರಣ ಮಾಡುತ್ತಿರುವುದು ಸರ್ಕಾರದ ಲ್ಯಾಬ್ ಪರೀಕ್ಷೆಯಲ್ಲಿ ಬಹಿರಂಗವಾಗಿದೆ.
ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆಯಿಂದ 63 ಸ್ಯಾಂಪಲ್ ಸಂಗ್ರಹಿಸಿದ್ದು, ಐಒಸಿಎಲ್ನಲ್ಲಿ ಶೇ. 31.2 ಹಾಗೂ ಎಚ್ಪಿಸಿಎಲ್ನಲ್ಲಿ ಶೇ. 30.5 ರಷ್ಟು ಎಥೆನಾಲ್ ಪತ್ತೆಯಾಗಿದೆ.
ಈ ಕಲಬೆರಕೆಯಿಂದ ವಾಹನಗಳ ಮೈಲೇಜ್ ಕಡಿಮೆಯಾಗಿ ವಾರ್ಷಿಕ ಸುಮಾರು 1.01 ಲಕ್ಷ ಕೋಟಿ ರೂ. ಹೊರೆಯಾಗುತ್ತಿದ್ದು, ತೈಲ ಕಂಪನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.