
ನೈಋತ್ಯ ರೈಲ್ವೆಯು ಚರ್ಲಪಲ್ಲಿ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (ಎಸ್ಎಂವಿಟಿ) ನಡುವಿನ ವಾರದ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸಂಚಾರವನ್ನು ನವೆಂಬರ್ ಮತ್ತು ಡಿಸೆಂಬರ್ 2026ರ ನಿರ್ದಿಷ್ಟ ದಿನಗಳಲ್ಲಿ ರದ್ದುಗೊಳಿಸಿದೆ.
ಚರ್ಲಪಲ್ಲಿಯಿಂದ ಬೆಂಗಳೂರಿಗೆ ನವೆಂಬರ್ 2, 9, 16, 23 ಹಾಗೂ 30ರಂದು ಮತ್ತು ಬೆಂಗಳೂರಿನಿಂದ ಚರ್ಲಪಲ್ಲಿಗೆ ನವೆಂಬರ್ 3, 10, 17, 24 ಹಾಗೂ ಡಿಸೆಂಬರ್ 1ರಂದು ಸಂಚರಿಸಬೇಕಿದ್ದ ರೈಲುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ದೀಪಾವಳಿ ಮತ್ತು ಛತ್ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಹುಬ್ಬಳ್ಳಿ ಮತ್ತು ಖಾತಿಪುರ ನಡುವೆ ಅಕ್ಟೋಬರ್ 31ರಿಂದ ಡಿಸೆಂಬರ್ 7ರವರೆಗೆ ಸಾಪ್ತಾಹಿಕ ವಿಶೇಷ ರೈಲುಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.