
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ತಗ್ಗಿದ್ದು, ಬಿರುಬಿಸಿಲಿನ ವಾತಾವರಣ ಮುಂದುವರೆದಿದ್ದರೂ ಕೆಲವು ಪ್ರಮುಖ ಜಲಾಶಯಗಳಿಗೆ ಒಳಹರಿವು ಮುಂದುವರೆದಿದೆ.
ಕೆಆರ್ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಪ್ರಸ್ತುತ ನೀರಿನ ಮಟ್ಟ 106.20 ಅಡಿಯಷ್ಟಿದೆ ಹಾಗೂ 3,971 ಕ್ಯೂಸೆಕ್ ಒಳಹರಿವು ಇದೆ.
ತುಂಗಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ 1,626.55 ಅಡಿಗಳಷ್ಟಿದ್ದು, ಜಲಾಶಯದಿಂದ 11,578 ಕ್ಯೂಸೆಕ್ ನೀರನ್ನು ಹೊರಹರಿವು ಮಾಡಲಾಗುತ್ತಿದೆ.