
ಕರ್ನಾಟಕದಲ್ಲಿ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದು, ಸರ್ಕಾರದಿಂದ 2500 ರೂ. ಪರಿಹಾರ ಘೋಷಣೆಯಾಗಿರುವ ನಡುವೆಯೇ ಸಚಿವರು ಮತ್ತು ಸಂಸದರ ಕಾರು ಖರೀದಿ ಮಿತಿ ಏರಿಸಲಾಗಿದೆ.
ರಾಜ್ಯ ಸರ್ಕಾರವು ಸಚಿವರು, ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರ ಹೊಸ ಕಾರು ಖರೀದಿಯ ಮೊತ್ತದ ಮಿತಿಯನ್ನು 26 ಲಕ್ಷ ರೂಪಾಯಿಗಳಿಂದ 31 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿ ಒಪ್ಪಿಗೆ ನೀಡಿದೆ.
ರೈತರು ಜೀವನದ ಚಿಂತೆಯಲ್ಲಿದ್ದರೆ ಜನಪ್ರತಿನಿಧಿಗಳು ವಾಹನ ಖರೀದಿಯ ಚಿಂತೆಯಲ್ಲಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.