
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಕೇರ್ ಬೈ ಬಿಎಲ್ಆರ್’ ಎಂಬ ಹೊಸ ಪ್ರೀಮಿಯಂ ಸೇವಾ ಬ್ರಾಂಡ್ ಆರಂಭವಾಗಿದ್ದು, ಇದು ಟರ್ಮಿನಲ್ 1 ಮತ್ತು 2ರಲ್ಲಿ 24 ಗಂಟೆಯೂ ಲಭ್ಯವಿರುತ್ತದೆ.
ಬಿಎಲ್ಆರ್ ಪಲ್ಸ್ ಆ್ಯಪ್ ಅಥವಾ ವೆಬ್ಸೈಟ್ ಮೂಲಕ ಮೀಟ್ ಅಂಡ್ ಅಸಿಸ್ಟ್, ಲಿಮೋ ಸೇವೆ, ವ್ಯಾಲೆಟ್ ಪಾರ್ಕಿಂಗ್ ಮತ್ತು ಲಗೇಜ್ ಸ್ಟೋರೇಜ್ ಸೇರಿದಂತೆ ಒಟ್ಟು 10 ಸೇವೆಗಳನ್ನು ಪ್ರಯಾಣಿಕರು ಪಡೆಯಬಹುದು.
ಪ್ರಯಾಣಿಕರಿಗೆ ವಿಐಪಿ ಅನುಭವ ನೀಡುವ ಉದ್ದೇಶದಿಂದ ಈ ಸೇವೆಯನ್ನು ವಿನ್ಯಾಸಗೊಳಿಸಲಾಗಿದ್ದು, ಬಿಎಂಡಬ್ಲ್ಯು ಕಾರುಗಳ ಸೌಲಭ್ಯ ಮತ್ತು ವೃತ್ತಿಪರ ಪೋರ್ಟರ್ಗಳ ಸಹಾಯವನ್ನು ಒಳಗೊಂಡಿದೆ.