
ಮಂಗಳೂರಿನ ಜೋಕಟ್ಟೆ ಬಳಿಯಿರುವ ಎಂಆರ್ಪಿಎಲ್ನ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಸೆಪ್ಟೆಂಬರ್ 30ರ ಮಧ್ಯಾಹ್ನ 12.15ಕ್ಕೆ ಟೆಸ್ಟಿಂಗ್ ಮಾಡುವಾಗ ಭಾರೀ ಸ್ಫೋಟ ಸಂಭವಿಸಿದ್ದು, 9 ಕಾರ್ಮಿಕರಿಗೆ ಗಾಯಗಳಾಗಿವೆ.
ಸುರತ್ಕಲ್ ನಿವಾಸಿ ರಾಜೇಶ್ಗೆ ಶೇಕಡಾ 35ರಷ್ಟು ಗಾಯಗಳಾಗಿದ್ದು ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸಾದ್, ಇಂದ್ರಜೀತ್, ರಾಮನ್ ಎಜಿ ಆಸ್ಪತ್ರೆಯಲ್ಲಿ ಹಾಗೂ ಜೆರೋಮ್, ಜಯರಾಮ್, ಅವಿನಾಶ್ ಮತ್ತು ಅಕ್ಷಯ್ MRPL ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಎಸ್ಡಿಆರ್ಎಫ್ ಹಾಗೂ ಪೊಲೀಸರು ಭೇಟಿ ನೀಡಿದ್ದು, ಸದ್ಯ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಮತ್ತು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.