
ಭಾರತೀಯ ನೌಕಾಪಡೆಗೆ ಬಲ ತುಂಬುವ ನಿಟ್ಟಿನಲ್ಲಿ ಐಎನ್ಎಸ್ ಸಮರ್ಥಕ್ ಯುದ್ಧನೌಕೆ ಕಾರವಾರದ ಕದಂಬ ನೌಕಾನೆಲೆಯಲ್ಲಿ ಲೋಕಾರ್ಪಣೆಗೊಂಡಿದ್ದು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.
ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ತಮಿಳುನಾಡಿನ ಕಟ್ಟುಪಳ್ಳಿಯಲ್ಲಿರುವ ಲಾರ್ಸನ್ ಅಂಡ್ ಟ್ಯೂಬ್ರೊ ಸಂಸ್ಥೆಯು ಈ ನೌಕೆಯನ್ನು ನಿರ್ಮಿಸಿದೆ.
ಸುಮಾರು 100 ಮೀಟರ್ಗಿಂತಲೂ ಹೆಚ್ಚು ಉದ್ದ ಮತ್ತು 5000 ಟನ್ಗಳಷ್ಟು ತೂಕವಿರುವ ಈ ನೌಕೆಯು 7200 ನಾಟಿಕಲ್ ಮೈಲಿಗಳಷ್ಟು ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ.