
ಫರೀದಾಬಾದ್ನ ಪಾಳುಬಿದ್ದ ಕಟ್ಟಡವೊಂದರಲ್ಲಿ 13 ವರ್ಷದ ಬಾಲಕಿಯ ಮೇಲೆ ಯುವಕರ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುನಾಲ್, ಯಶ್ ಮತ್ತು ದೀಪಕ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 24ರಂದು ನಡೆದ ಈ ಘಟನೆಯು ಬಾಲಕಿಯು ಮಾನಸಿಕ ಖಿನ್ನತೆಗೆ ಒಳಗಾದ ಬಳಿಕ ತಾಯಿಗೆ ವಿಷಯ ತಿಳಿಸುವುದರೊಂದಿಗೆ ಬೆಳಕಿಗೆ ಬಂದಿದೆ.