
ಬೆಂಗಳೂರಿನ ಭೋಗನಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಗೆ ಅಕ್ರಮವಾಗಿ ಜಿಲೆಟಿನ್ ಬಳಸಲಾಗುತ್ತಿದೆ ಎಂಬ ದೂರಿನ ಮೇರೆಗೆ ಬೆಳ್ಳಂದೂರು ಠಾಣೆ ಪೊಲೀಸರು 800 ಕೆಜಿಗೂ ಹೆಚ್ಚು ಜಿಲೆಟಿನ್ ವಶಪಡಿಸಿಕೊಂಡಿದ್ದಾರೆ.
ಆದರ್ಶ ಕಂಪನಿಯ ಕಟ್ಟಡ ಕಾಮಗಾರಿ ವೇಳೆ ಕಲ್ಲುಗಳನ್ನು ತೆರವುಗೊಳಿಸಲು ರಾತ್ರಿ 12 ಗಂಟೆಯ ನಂತರ ಸ್ಫೋಟಕಗಳನ್ನು ಬಳಸಲಾಗುತ್ತಿತ್ತು ಎಂದು ಸ್ಥಳೀಯರು ಆರೋಪಿಸಿದ್ದು, ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ.
ಶ್ರೀನಿವಾಸ ಅರ್ಥ್ ಮೂವರ್ಸ್ ಮಾಲೀಕ ಅರುಣ್ ಕುಮಾರ್ ಸೇರಿದಂತೆ ಸೈಟ್ ಇನ್‌ಚಾರ್ಜ್ ಮತ್ತು ಗುತ್ತಿಗೆದಾರರ ವಿರುದ್ಧ ಕಾನೂನುಬಾಹಿರವಾಗಿ ಸ್ಫೋಟಕ ಸಂಗ್ರಹಿಸಿದ ಆರೋಪದಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.