
ಯಶ್ ರಾವಣನ ಪಾತ್ರದಲ್ಲಿ ಅಬ್ಬರಿಸಿ ಜೀವ ತುಂಬಿದ್ದು, ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ಅಭಿನಯಿಸಿದ್ದು, ದೃಶ್ಯಗಳು ಗ್ರಾಫಿಕ್ಸ್ ಮೂಲಕ ನೈಜವಾಗಿ ಮೂಡಿಬಂದಿವೆ.
ಸೀತೆಯ ಅಪಹರಣದವರೆಗೆ ಮಾತ್ರ ಕಥೆ ತೋರಿಸಲಾಗಿದ್ದು, ರಾಮ-ರಾವಣರ ಮುಖಾಮುಖಿ ಹಾಗೂ ಆಂಜನೇಯನ ಪ್ರವೇಶ ಮುಂದಿನ ಭಾಗದಲ್ಲಿ ಇರಲಿದೆ.