
ಕರ್ನಾಟಕದಲ್ಲಿ ಮತದಾರರ ಕರಡು ಪಟ್ಟಿ ಪ್ರಕಟವಾಗಿದ್ದು, ದತ್ತಾಂಶದಲ್ಲಿನ ವ್ಯತ್ಯಾಸ ಅಥವಾ ಮ್ಯಾಪಿಂಗ್ ಕೊರತೆಯಿಂದಾಗಿ ಸುಮಾರು 43.8 ಲಕ್ಷ ಮತದಾರರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.
ನೋಟಿಸ್ ಪಡೆದ ಮತದಾರರು ಸೆಪ್ಟೆಂಬರ್ 23ರೊಳಗೆ ನಿಗದಿತ ಸ್ಥಳದಲ್ಲಿ ಇಆರ್‌ಒ (ERO) ಮುಂದೆ ಅಗತ್ಯ ದಾಖಲೆಗಳೊಂದಿಗೆ ಖುದ್ದಾಗಿ ಹಾಜರಾಗಿ ವಿಚಾರಣೆಗೆ ಒಳಪಡಬೇಕಿದೆ.
ಕರಡು ಪಟ್ಟಿಯಲ್ಲಿ ಹೆಸರಿದ್ದರೂ ಅಂತಿಮ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಈ ಪ್ರಕ್ರಿಯೆ ಕಡ್ಡಾಯವಾಗಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27, 2026 ರಂದು ಪ್ರಕಟಿಸಲಾಗುವುದು.