
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ 25 ವರ್ಷದ ನೇಹಾ ಠಾಕೂರ್ ಕೋವಿಡ್ ಸಂಕಷ್ಟದಿಂದ ಏರ್ಹೋಸ್ಟೆಸ್ ತರಬೇತಿ ಅರ್ಧಕ್ಕೆ ನಿಲ್ಲಿಸಿ ದೇಶದ ಮೊದಲ ಮಹಿಳಾ ಟ್ರಕ್ ಡ್ರೈವರ್ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
ತಂದೆಯ ಬೆಂಬಲದೊಂದಿಗೆ ಹೆವಿ ವೆಹಿಕಲ್ ಲೈಸೆನ್ಸ್ ಪಡೆದ ಅವರು, ಪ್ರಸ್ತುತ 12 ಟನ್ ತೂಕದ ಟಾಟಾ ಟ್ರಕ್ ಚಲಾಯಿಸುತ್ತಾ ರಾಜ್ಯದಿಂದ ರಾಜ್ಯಕ್ಕೆ ಸರಕು ಸಾಗಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿಯೂ ಜನಪ್ರಿಯತೆ ಗಳಿಸಿರುವ ನೇಹಾ ಅವರ ಯೂಟ್ಯೂಬ್ ಚಾನೆಲ್ಗೆ ಲಕ್ಷಾಂತರ ಚಂದಾದಾರರಿದ್ದಾರೆ.