
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ 15,000 ರನ್‌ಗಳ ಅಪರೂಪದ ಸಾಧನೆ ಮಾಡಿದ್ದಾರೆ. ತನ್ನ ಗಮನ ಎಂದಿಗೂ ಮೈಲಿಗಲ್ಲುಗಳ ಮೇಲಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ದೈಹಿಕ ಫಿಟ್‌ನೆಸ್ ಹಾಗೂ ಮಾನಸಿಕವಾಗಿ ಫ್ರೆಶ್ ಆಗಿರುವುದು ತಮ್ಮ ಸುದೀರ್ಘ ಯಶಸ್ಸಿನ ರಹಸ್ಯ ಎಂದು ತಿಳಿಸಿರುವ ಕೊಹ್ಲಿ, ಮುಕ್ತ ಮನಸ್ಸಿನಿಂದ ಆಕ್ರಮಣಕಾರಿಯಾಗಿ ಆಡುವ ಹೊಸ ಆವೃತ್ತಿಯನ್ನು ಅನ್ವೇಷಿಸುತ್ತಿರುವುದಾಗಿ ಹೇಳಿದರು.
ಯುವ ಆಟಗಾರ ಶುಭ್‌ಮನ್ ಗಿಲ್ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಕೊಹ್ಲಿ, ಮುಂದಿನ ಏಕದಿನ ವಿಶ್ವಕಪ್ ಗೆಲುವೇ ತನ್ನ ಪ್ರಮುಖ ಗುರಿ ಎಂದು ಸ್ಪಷ್ಟಪಡಿಸಿದ್ದಾರೆ.