
ಅರುಣಾಚಲ ಪ್ರದೇಶದ ಇಟಾನಗರದ 4 ವರ್ಷದ ಬಾಲಕಿ ಕಾರ್ಗಾ ಟಿಂಕಲ್, ತನ್ನನ್ನು 'ಚೈನೀಸ್' ಎಂದು ಕರೆದ ವ್ಯಕ್ತಿಗೆ 'ನಾವು ಭಾರತೀಯರು' ಎಂದು ದಿಟ್ಟ ಉತ್ತರ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈಶಾನ್ಯ ಭಾರತೀಯರ ಮುಖಲಕ್ಷಣಗಳನ್ನು ನೋಡಿ ಅವರನ್ನು ಚೀನಾದವರೆಂದು ತಪ್ಪಾಗಿ ಭಾವಿಸುವ ಸಮಾಜದ ಪೂರ್ವಗ್ರಹ ಪೀಡಿತ ಮನಸ್ಥಿತಿಯ ವಿರುದ್ಧ ಈ ಬಾಲಕಿ ತನ್ನ ನೋವನ್ನು ಮುಗ್ಧವಾಗಿ ವ್ಯಕ್ತಪಡಿಸಿದ್ದಾಳೆ.
ಈ ವಿಡಿಯೋ ಲಕ್ಷಾಂತರ ನೆಟ್ಟಿಗರ ಗಮನ ಸೆಳೆದಿದ್ದು, ಈಶಾನ್ಯ ಭಾರತೀಯರು ತಮ್ಮದೇ ದೇಶದಲ್ಲಿ ಎದುರಿಸುತ್ತಿರುವ ಜನಾಂಗೀಯ ನಿಂದನೆ ಮತ್ತು ವರ್ಣಭೇದದ ಬಗ್ಗೆ ದೇಶಾದ್ಯಂತ ಚರ್ಚೆ ಹುಟ್ಟುಹಾಕಿದೆ.