
ಅಮೆರಿಕದಂತಹ ಶ್ರೀಮಂತ ರಾಷ್ಟ್ರಗಳಲ್ಲಿ ಎಐನಿಂದ ಶೇ. 14.2ರಷ್ಟು ಉದ್ಯೋಗ ಕಡಿತದ ಅಪಾಯವಿದ್ದರೆ, ಭಾರತದಲ್ಲಿ ಈ ಪ್ರಮಾಣ ಕೇವಲ ಶೇ. 4.5ರಷ್ಟು ಮಾತ್ರ ಇರಲಿದೆ ಎಂದು ವರದಿ ತಿಳಿಸಿದೆ.
ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಎಐ ತಂತ್ರಜ್ಞಾನವು ಮನುಷ್ಯರ ಕೆಲಸಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲಿದ್ದು, ಉತ್ಪಾದಕತೆಯನ್ನು ಶೇ. 16.2ರಷ್ಟು ಹೆಚ್ಚಿಸಲಿದೆ.
ಎಐ ಅನ್ನು ಇಂಧನ, ಸಾರಿಗೆ, ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಬಳಸಿಕೊಂಡರೆ ಮುಂದಿನ 10 ವರ್ಷಗಳಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಲು ಸಾಧ್ಯವಿದೆ.