
ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಚೊಚ್ಚಲ ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿ 2027ರ ಆತಿಥ್ಯವನ್ನು ಐಸಿಸಿ ಭಾರತಕ್ಕೆ ಹಸ್ತಾಂತರಿಸಿದ್ದು, ಟೂರ್ನಿಯು ಫೆಬ್ರವರಿ 14 ರಿಂದ 28ರವರೆಗೆ ನಡೆಯಲಿದೆ.
ಟಿ20 ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ವಿಶ್ವದ ಅಗ್ರ 6 ತಂಡಗಳು ಭಾಗವಹಿಸಲಿದ್ದು, ಮುಂಬೈನ ಬ್ರಬೋರ್ನ್ ಮತ್ತು ವಡೋದರಾ ಸ್ಟೇಡಿಯಂಗಳಲ್ಲಿ ಒಟ್ಟು 16 ಪಂದ್ಯಗಳು ಜರುಗಲಿವೆ.
ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಝಿಲೆಂಡ್, ಸೌತ್ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಈ ಐತಿಹಾಸಿಕ ಟೂರ್ನಿಯಲ್ಲಿ ಕಾದಾಡಲಿದ್ದು, ಟೀಮ್ ಇಂಡಿಯಾ ತವರಿನಲ್ಲಿ ಕಿರೀಟ ಗೆಲ್ಲುವ ನಿರೀಕ್ಷೆಯಲ್ಲಿದೆ.