
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಚಟುವಟಿಕೆಯೊಂದರ ಮೂಲಕ ಸ್ಪರ್ಧಿಗಳು ಬೆನ್ನ ಹಿಂದೆ ಮಾತನಾಡಿಕೊಂಡಿದ್ದ ವಿಡಿಯೋಗಳನ್ನು ಪ್ರದರ್ಶಿಸಲಾಗಿದ್ದು, ಇದರಿಂದ ಎಲ್ಲ ಸ್ಪರ್ಧಿಗಳಿಗೆ ಶಾಕ್ ಉಂಟಾಗಿದೆ.
ತಾಂಡವ್ ರಾಮ್ ಬಗ್ಗೆ ಸೌಂದರ್ಯಾ ಅವರು ಗಗನ್ ಚಿನ್ನಪ್ಪ ಬಳಿ 'ಈ ಮನೆಯ ಅತಿ ದೊಡ್ಡ ಮೂರ್ಖ' ಎಂದು ಮಾತನಾಡಿದ್ದ ವಿಡಿಯೋ ಪ್ರದರ್ಶನಗೊಂಡಾಗ ತಾಂಡವ್ ತೀವ್ರ ಬೇಸರ ವ್ಯಕ್ತಪಡಿಸಿದರು.
ಧನುಷ್ ಅವರು ಗಾನವಿ ಬಗ್ಗೆ ಡ್ರಾಮಾ ಮಾಡುತ್ತಾಳೆ ಎಂದು ಮಾತನಾಡಿದ್ದ ವಿಡಿಯೋ ಬಯಲಾಗಿದ್ದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ಹಾಗೂ ಜಗಳ ನಡೆದಿದೆ.