
ಬಿಗ್ ಬಾಸ್ ಕನ್ನಡ ವಾರದ ಕಥೆಯ ವೀಕೆಂಡ್ ಸಂಚಿಕೆಯಲ್ಲಿ ಮನೆಯ ಉಸ್ತುವಾರಿಯಾಗಿದ್ದ ಆಸಿಯಾ ಅವರ ಕಾರ್ಯವೈಖರಿಯನ್ನು ನಿರೂಪಕ ಕಿಚ್ಚ ಸುದೀಪ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಜು ಸ್ಪರ್ಧಿಗೆ ಕೆಟ್ಟದಾಗಿ ಮಾತನಾಡಿದ್ದನ್ನು ಆಸಿಯಾ ತಡೆಯಬೇಕಿತ್ತು ಎಂದು ಹೇಳಿದ ಸುದೀಪ್, ಜವಾಬ್ದಾರಿ ನಿರ್ವಹಿಸುವಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದರು.
ಸುದೀಪ್ ಅವರ ಖಡಕ್ ಮಾತಿನಿಂದ ಮನನೊಂದ ಆಸಿಯಾ ಬಿಗ್ ಬಾಸ್ ಮನೆಯಲ್ಲೇ ಕಣ್ಣೀರು ಹಾಕಿದ್ದು, ಈ ವಿಷಯ ಚರ್ಚೆಗೆ ಗ್ರಾಸವಾಗಿದೆ.