
ಡಿಆರ್‌ಡಿಒದ ಸಾಲಿಡ್ ಸ್ಟೇಟ್ ಫಿಸಿಕ್ಸ್ ಲ್ಯಾಬೋರೇಟರಿ (SSPL) 41 ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, 12 ತಿಂಗಳ ತರಬೇತಿ ನೀಡಲಿದೆ.
2022 ರಿಂದ 2026ರ ನಡುವೆ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಐಟಿಐ ಅಭ್ಯರ್ಥಿಗಳು ಸಂಬಂಧಿತ ಟ್ರೇಡ್‌ನಲ್ಲಿ ತೇರ್ಗಡೆಯಾಗಿರಬೇಕು.
ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ಆಗಸ್ಟ್ 21ರೊಳಗೆ 'ನಿರ್ದೇಶಕರು, SSPL, DRDO, ಲಕ್ನೋ ರಸ್ತೆ, ತಿಮಾರ್ಪುರ್, ದೆಹಲಿ-110054' ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು.