
ಮಾತು ಮತ್ತು ಶ್ರವಣದ ತೊಂದರೆ ಹೊಂದಿರುವ ಜಮ್ಮುವಿನ 45 ವರ್ಷದ ರೇಣು ಹನ್ಸ್ ಅವರು 22 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರ ಬೋರ್ಡ್ 10ನೇ ತರಗತಿ ಪರೀಕ್ಷೆ ಬರೆದು ಶೇ.82ರಷ್ಟು ಅಂಕ ಗಳಿಸಿದ್ದಾರೆ.
ವಿಜ್ಞಾನ ವಿಭಾಗದ 12ನೇ ತರಗತಿ ವಿದ್ಯಾರ್ಥಿಯಾಗಿರುವ ಅವರ ಏಕೈಕ ಮಗ ನಮನ್ ಕೌಲ್ ಪ್ರತಿದಿನ ಸಂಜೆ ಹಾಗೂ ರಾತ್ರಿ ತಾಯಿಗೆ ಪಾಠ ಹೇಳಿಕೊಟ್ಟು ಓದಿಗೆ ನೆರವಾಗಿದ್ದಾನೆ.
ಕಾಶ್ಮೀರ ಕಣಿವೆಯಿಂದ ವಲಸೆ ಬಂದಿರುವ ಈ ಕುಟುಂಬವು ಜಮ್ಮುವಿನಲ್ಲಿ ವಾಸಿಸುತ್ತಿದ್ದು, ಪತಿ ಬಾಬ್ಲು ಕೌಲ್ ಮನೆಯಿಂದಲೇ ಟೈಲರಿಂಗ್ ಕೆಲಸ ಮಾಡುತ್ತಾರೆ.