
ಮಹಿಳಾ ಪ್ರೀಮಿಯರ್ ಲೀಗ್ 2027ರ ಮಿನಿ ಹರಾಜು ಮುಕ್ತಾಯಗೊಂಡಿದ್ದು, ಐದು ಫ್ರಾಂಚೈಸಿಗಳು ತಮ್ಮ ತಂಡಗಳಿಗೆ ಅಗತ್ಯವಿರುವ ಆಟಗಾರ್ತಿಯರನ್ನು ಸೇರ್ಪಡೆ ಮಾಡಿಕೊಂಡಿವೆ.
ಆಸ್ಟ್ರೇಲಿಯಾದ ಆಲ್‌ರೌಂಡರ್ ಸೋಫಿ ಮೊಲಿನ್ಯೂಕ್ಸ್ ಅವರನ್ನು ಯುಪಿ ವಾರಿಯರ್ಸ್ ತಂಡವು ಬರೋಬ್ಬರಿ 1.1 ಕೋಟಿ ರೂ. ನೀಡಿ ಖರೀದಿಸಿದ್ದು, ಈ ಬಾರಿಯ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಪಡೆದ ಆಟಗಾರ್ತಿಯಾಗಿದ್ದಾರೆ.
ಈ ಹರಾಜಿಗಾಗಿ ಒಟ್ಟು 146 ಆಟಗಾರ್ತಿಯರನ್ನು ಅಂತಿಮ ಪಟ್ಟಿಗೆ ಆಯ್ಕೆ ಮಾಡಲಾಗಿದ್ದು, ಐದು ತಂಡಗಳಲ್ಲಿ ಖಾಲಿ ಇದ್ದ 27 ಸ್ಥಾನಗಳನ್ನು ಭತಿ ಮಾಡಲಾಗಿದೆ.