
ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಅವರ ಆಡಳಿತ ವೈಖರಿ ಹಾಗೂ ಜಿಲ್ಲಾಡಳಿತದಲ್ಲಿ ಜಿಲ್ಲಾ ಮಂತ್ರಿ ಮತ್ತು ಡಿಸಿ ನಡುವೆ ಸಂಘರ್ಷ ಶುರುವಾಗಿರುವ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿಸಿ ಲತಾ ಕುಮಾರಿ ಅವರ ಹಿಂದಿನ ಕೆಪಿಎಸ್‌ಸಿ ವಿವಾದವನ್ನು ಪ್ರಸ್ತಾಪಿಸಿದ ಅವರು, ಅವರನ್ನು ಅಮಾನತುಗೊಳಿಸಬೇಕಿತ್ತು ಆದರೆ ಇಲ್ಲಿ ಕರೆತಂದು ರಕ್ಷಣೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಕೆಲಸ ಮಾಡದಿದ್ದರೆ ನಾಡಿನ ಜನ ದಂಗೆ ಏಳುವುದು ದೂರವಿಲ್ಲ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.