ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಉಳಿಕೆ ಮೂಲ ವೃಂದದ 560 ಭೂಮಾಪಕ ಹಾಗೂ 505 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಲಿಖಿತ ಪರೀಕ್ಷೆಗಳು ಅಕ್ಟೋಬರ್ 2 ಮತ್ತು 4ರಂದು ನಡೆಯಲಿವೆ.
560 ಭೂಮಾಪಕ ಹುದ್ದೆಗಳಿಗೆ ಒಟ್ಟು 92,701 ಮಂದಿ ಹಾಗೂ 505 ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ 4,11,656 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ತಡೆಯಲು ಸಿಸಿಟಿವಿ ಕಣ್ಗಾವಲು, ಜಾಮರ್ ಹಾಗೂ ಮುಖ ಚಹರೆ ಪತ್ತೆ ತಂತ್ರಜ್ಞಾನ ವ್ಯವಸ್ಥೆ ಮಾಡಲಾಗಿದೆ.