
ದೇಶದ ಪ್ರಮುಖ ಬ್ರೋಕರೇಜ್ ಸಂಸ್ಥೆ ಜೆರೋದಾದಲ್ಲಿ ಕೇವಲ 28 ದಿನದ ಮಗುವಿನ ಹೆಸರಿನಲ್ಲಿ ಅಪ್ರಾಪ್ತರ ಡಿಮ್ಯಾಟ್ ಖಾತೆ ತೆರೆಯಲಾಗಿದೆ.
ಈ ಮೂಲಕ ಸದರಿ ಕಂದಮ್ಮ ಸಂಸ್ಥೆಯ ಇತಿಹಾಸದಲ್ಲೇ ಅತ್ಯಂತ ಕಿರಿಯ ಹೂಡಿಕೆದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಹಸಂಸ್ಥಾಪಕ ನಿತಿನ್ ಕಾಮತ್ ತಿಳಿಸಿದ್ದಾರೆ.
ಪೋಷಕರು ಅಥವಾ ಕಾನೂನುಬದ್ಧ ಪಾಲಕರು ಈ ಖಾತೆಯನ್ನು ನಿರ್ವಹಿಸುತ್ತಿದ್ದು, ಇದರ ಮೂಲಕ ಷೇರುಗಳು ಹಾಗೂ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ.