
ಬಾಂಗ್ಲಾದೇಶದ ಚಟ್ಟೋಗ್ರಾಮ್‌ನಲ್ಲಿ ಇಂದು ನಡೆದ ಸೇನಾ ಫೈರಿಂಗ್ ಅಭ್ಯಾಸದ ವೇಳೆ ಚೀನಾ ನಿರ್ಮಿತ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಯೋಧರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಠಾಜಾರಿ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಮಿಲಿಟರಿ ಅಭ್ಯಾಸ ನಡೆಯುತ್ತಿದ್ದಾಗ ಟ್ಯಾಂಕ್‌ನಿಂದ ಫೈರಿಂಗ್ ನಡೆಸಿದ ತಕ್ಷಣ ಈ ದುರಂತ ಸಂಭವಿಸಿದೆ ಎಂದು 'ಇಂಟರ್-ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ ಡೈರೆಕ್ಟರೇಟ್' ಖಚಿತಪಡಿಸಿದೆ.
ಈ ಘಟನೆಯಲ್ಲಿ ಒಬ್ಬ ಸೇನಾಧಿಕಾರಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ.