
ಉಗ್ರರ ವಿಡಿಯೋಗಳನ್ನು ತೆಗೆದು ಹಾಕದ ಕಾರಣಕ್ಕೆ ಟೆಲಿಗ್ರಾಂ ಆ್ಯಪ್ ವಿರುದ್ಧ ಆಸ್ಟ್ರೇಲಿಯಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಕಂಪನಿಯು 38 ದಶಲಕ್ಷ ಡಾಲರ್ ಅಂದರೆ ಸುಮಾರು ₹363 ಕೋಟಿ ದಂಡ ಪಾವತಿಸಬೇಕಾಗಬಹುದು.
ಇಸ್ಲಾಮಿಕ್ ಸ್ಟೇಟ್ ಉಗ್ರರ ಶಿರಚ್ಛೇದ, ಬಫೊಲೊ ಮತ್ತು ಕ್ರೈಸ್ಟ್‌ಚರ್ಚ್ ದಾಳಿಯ ವಿಡಿಯೋಗಳನ್ನು ತೆಗೆದು ಹಾಕುವಂತೆ ನೋಟಿಸ್ ನೀಡಿದ್ದರೂ ಟೆಲಿಗ್ರಾಂ ಕ್ರಮ ಕೈಗೊಂಡಿಲ್ಲ ಎಂದು ಆಸ್ಟ್ರೇಲಿಯಾ ಆರೋಪಿಸಿದೆ.
ಟೆಲಿಗ್ರಾಂ ತನ್ನ ಸಮರ್ಥನೆಯಲ್ಲಿ 2026ರಲ್ಲಿಯೇ ಭಯೋತ್ಪಾದನೆ ಸಂಬಂಧಿತ 1.50 ಲಕ್ಷ ಗುಂಪುಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ತಿಳಿಸಿದ್ದು, ರಷ್ಯಾ ಪಾವೆಲ್ ಅವರನ್ನು ವಾಂಟೆಡ್ ಪಟ್ಟಿಗೆ ಸೇರಿಸಿದೆ.