
2027ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ 2.82 ಲಕ್ಷ ರೂಪಾಯಿ ದಾಟಲಿದೆ ಎಂದು ಬಾಬಾ ವಂಗಾ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭವಿಷ್ಯವೊಂದು ವೈರಲ್ ಆಗಿದೆ.
ಆದರೆ ಬಾಬಾ ವಂಗಾ ಅವರು ಈ ರೀತಿಯ ಯಾವುದೇ ಅಧಿಕೃತ ಅಥವಾ ನೇರ ಭವಿಷ್ಯ ನುಡಿದಿರುವುದಕ್ಕೆ ಯಾವುದೇ ಬಲವಾದ ಲಿಖಿತ ಸಾಕ್ಷ್ಯಗಳಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಮಾರುಕಟ್ಟೆ ತಜ್ಞರ ಪ್ರಕಾರ ಜಾಗತಿಕ ಅನಿಶ್ಚಿತತೆಗಳಿಂದಾಗಿ ಈ ವರ್ಷದ ಅಂತ್ಯಕ್ಕೆ ಚಿನ್ನದ ಬೆಲೆ 1.80 ಲಕ್ಷ ರೂಪಾಯಿ ತಲುಪುವ ಸಾಧ್ಯತೆಯಿದೆ.