
ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯ ಸೋಯಾಬೀನ್ ಬೆಳೆಗಾರ ಚಾಂದ್ ಶೇಖ್ ಎಂಬ ರೈತ, ಸರ್ಕಾರ ಘೋಷಿಸಿರುವ 5,000 ರೂಪಾಯಿ ಮಧ್ಯಂತರ ಬರ ಪರಿಹಾರ ಸಾಲದು ಎಂದು ಸ್ನೇಹಿತರಿಂದ ಸಾಲ ಪಡೆದು ಅದೇ ಹಣವನ್ನು ಮುಖ್ಯಂತ್ರಿಗೆ ಮನಿ ಆರ್ಡರ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಕೃಷಿಗಾಗಿ 25,000 ರೂಪಾಯಿ ಖರ್ಚು ಮಾಡಿದ್ದರೂ ಕೇವಲ 60 ಕೆ.ಜಿ. ಇಳುವರಿಯಿಂದ 3,900 ರೂಪಾಯಿ ಮಾತ್ರ ಆದಾಯ ಬಂದಿIದೆ ಎಂದು ರೈತ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಬರ ಪರಿಸ್ಥಿತಿ ತೀವ್ರಗೊಂಡಿದ್ದು, ಒಟ್ಟು 358 ತಾಲೂಕುಗಳ ಪೈಕಿ 305 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.