
ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣ, ಪಠ್ಯಕ್ರಮ ಮತ್ತು ಅನಧಿಕೃತ ಕೋಚಿಂಗ್ ಸೆಂಟರ್‌ಗಳಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಶಿಕ್ಷಣ ಸುಧಾರಣಾ ಉಪಸಮಿತಿಯನ್ನು ರಚಿಸಿದೆ.
ನೋಂದಣಿ ಇಲ್ಲದೆ, ಶಾಲಾ ಸಮಯದಲ್ಲೇ ಸಮಾನಾಂತರವಾಗಿ ಕೋಚಿಂಗ್ ನಡೆಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿರುವ ಕೇಂದ್ರಗಳ ವಿರುದ್ಧ ಕಠಿಣ ನಿಯಮಗಳ ಬಗ್ಗೆ ಸಮಿತಿ ಸಾರ್ವಜನಿಕರಿಂದ ಅಭಿಪ್ರಾಯ ಕೇಳುತ್ತಿದೆ.
ಪೋಷಕರು ಮತ್ತು ಶಿಕ್ಷಣ ತಜ್ಞರ ಸಲಹೆಗಳನ್ನು ಕ್ರೋಡೀಕರಿಸಿ ಸಮಿತಿಯು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ನೂತನ ನಿಯಮಗಳು ಜಾರಿಗೆ ಬರಲಿವೆ.