
ಬೆಂಗಳೂರಿನ ಉತ್ತರಹಳ್ಳಿಯ ಗೌಡನಪಾಳ್ಯದ ನಿವಾಸಿ, 7ನೇ ತರಗತಿಯ 13 ವರ್ಷದ ಬಾಲಕ ಕಿಶೋರ್ ಜುಲೈ 27ರಿಂದ ನಾಪತ್ತೆಯಾಗಿದ್ದು, ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮನೆಗೆ ಅಕ್ವೇರಿಯಂ ಮೀನು ತಂದಿದ್ದಕ್ಕೆ ತಂದೆ ನಾಗೇಂದ್ರ ಬೈದು ಟ್ಯೂಷನ್ಗೆ ಹೋಗುವಂತೆ ಹೇಳಿದ್ದರಿಂದ ಮನನೊಂದ ಬಾಲಕ, ಸಂಜೆ 5 ಗಂಟೆಗೆ ಸೈಕಲ್ನಲ್ಲಿ ಮನೆಯಿಂದ ಹೊರಹೋಗಿ ವಾಪಸ್ ಬಂದಿಲ್ಲ.
ನಾಲ್ಕು ದಿನ ಕಳೆದರೂ ಬಾಲಕನ ಸುಳಿವು ಸಿಗದ ಕಾರಣ ಪೋಷಕರು ಕಂಗಾಲಾಗಿದ್ದು, ಪೊಲೀಸರು ಬಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.