
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಿದೆ.
ರಸ್ತೆ ಸುರಕ್ಷತೆ, ವಿಮೆಯ ಕೊರತೆ ಮತ್ತು ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ಬೈಕ್ ಟ್ಯಾಕ್ಸಿಗಳ ವ್ಯಾಖ್ಯಾನ ಇಲ್ಲದಿರುವುದನ್ನು ಸರ್ಕಾರ ಪ್ರಮುಖ ಕಾರಣಗಳಾಗಿ ಮುಂದಿಟ್ಟಿದೆ.
ಸಾರಿಗೆ ಇಲಾಖೆಯು ಕಳೆದ ಎರಡು ದಿನಗಳಲ್ಲಿ ಬೆಂಗಳೂರಿನಲ್ಲಿ 341ಕ್ಕೂ ಹೆಚ್ಚು ಅನಧಿಕೃತ ಬೈಕ್ ಟ್ಯಾಕ್ಸಿಗಳನ್ನು ಜಪ್ತಿ ಮಾಡಿದ್ದು, 11 ವಿಶೇಷ ತಂಡಗಳನ್ನು ರಚಿಸಿದೆ.