
ಲಖನೌದಿಂದ ಬೆಂಗಳೂರಿಗೆ ಬಂದಿದ್ದ ಇಂಡಿಗೋ 6E-231 ವಿಮಾನಕ್ಕೆ ಬಾಂಬ್ ಬೆದರಿಕೆ ಪತ್ರ ಬಂದಿದ್ದು, ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ತುರ್ತು ಪರಿಶೀಲನೆ ನಡೆಸಲಾಯಿತು.
ವಿಮಾನ ಹಾರಾಟದಲ್ಲಿದ್ದಾಗ ಸಿಬ್ಬಂದಿಗೆ ಬೆದರಿಕೆ ಪತ್ರ ಸಿಕ್ಕಿದ್ದು, ಪೈಲಟ್ ಎಟಿಸಿಗೆ ಮಾಹಿತಿ ನೀಡಿದ ನಂತರ ರನ್‌ವೇ ಪಕ್ಕದಲ್ಲಿ ವಿಮಾನ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು.
ಶ್ವಾನದಳ, ಸಿಐಎಸ್ಎಫ್ ಮತ್ತು ಪೊಲೀಸರು ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರೇ ಪತ್ರ ಬರೆದಿಟ್ಟಿರುವ ಶಂಕೆ ವ್ಯಕ್ತವಾಗಿದೆ.