
ರಷ್ಯಾದ ಮಾಸ್ಕೋದ ಕುದ್ರಿನ್ಸ್ಕಾಯಾ ಚೌಕದಲ್ಲಿರುವ ಬಾಲ್ಜಿ ರೊಸ್ಸಿ ರೆಸ್ಟೋರೆಂಟ್ ಹೊರಭಾಗದಲ್ಲಿ ಶನಿವಾರ ರಾತ್ರಿ 8.10ಕ್ಕೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದಾರೆ.
ಈ ಘಟನೆಯಲ್ಲಿ 21 ಜನರು ಗಂಭೀರವಾಗಿ ಗಾಯಗೊಂಡಿದ್ದು, ಐಇಡಿ ಸ್ಫೋಟಕ ಹೊತ್ತು ತಂದಿದ್ದ ಅಪರಿಚಿತ ಮಹಿಳೆ, ಭದ್ರತಾ ಸಿಬ್ಬಂದಿ ಮತ್ತು ಒಬ್ಬ ಗ್ರಾಹಕ ಮೃತಪಟ್ಟಿದ್ದಾರೆ ಎಂದು ರಷ್ಯಾದ ಸಮಿತಿ ತಿಳಿಸಿದೆ.
ಸ್ಫೋಟದ ಹಿಂದಿನ ಉದ್ದೇಶ ಮತ್ತು ಮಹಿಳೆಯ ಗುರುತನ್ನು ಪತ್ತೆಹಚ್ಚಲು ತನಿಖಾ ಸಮಿತಿ ವಿಧಿವಿಜ್ಞಾನ ತನಿಖೆ ನಡೆಸುತ್ತಿದ್ದು, ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಭದ್ರತಾ ಭೀತಿ ಹೆಚ್ಚಾಗಿದೆ.