
ದೀಪಾವಳಿ ಹಾಗೂ ಛತ್ ಹಬ್ಬದ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಮುಂಬೈನ ಸಿಎಸ್ಎಂಟಿ ಹಾಗೂ ಬೆಂಗಳೂರಿನ ಎಸ್ಎಂವಿಟಿ ನಡುವೆ ಸಾಪ್ತಾಹಿಕ ವಿಶೇಷ ರೈಲುಗಳನ್ನು ಓಡಿಸಲು ಮಧ್ಯ ರೈಲ್ವೆ ನಿರ್ಧರಿಸಿದೆ.
ಈ ರೈಲುಗಳು ಅಕ್ಟೋಬರ್ 10ರಿಂದ ನವೆಂಬರ್ 22ರವರೆಗೆ ಪ್ರತಿ ದಿಕ್ಕಿನಲ್ಲಿ 7 ಟ್ರಿಪ್‌ಗಳಂತೆ ಸಂಚರಿಸಲಿದ್ದು, ತುಮಕೂರು, ಹುಬ್ಬಳ್ಳಿ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲ್ಲಲಿವೆ.
ಈ ವಿಶೇಷ ರೈಲುಗಳು ಒಟ್ಟು 22 ಬೋಗಿಗಳನ್ನು ಹೊಂದಿರಲಿದ್ದು, ಇದರಲ್ಲಿ 2 ಎಸಿ 2-ಟೈರ್ ಮತ್ತು 18 ಎಸಿ 3-ಟೈರ್ ಬೋಗಿಗಳು ಇರಲಿವೆ.