
‘ಹನುಮಾನ್’ ಚಿತ್ರದ ಮೂಲಕ ಖ್ಯಾತಿ ಗಳಿಸಿರುವ ನಟ ತೇಜ ಸಜ್ಜಾ ಅವರು ಅಮೆರಿಕದಲ್ಲಿ ನೆಲೆಸಿರುವ ಟೆಕ್ಕಿ ಯುವತಿಯೊಂದಿಗೆ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ಹಿರಿಯರು ನಿಶ್ಚಯಿಸಿರುವ ಈ ಅರೇಂಜ್ಡ್ ಮ್ಯಾರೇಜ್ ಡಿಸೆಂಬರ್‌ನಲ್ಲಿ ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಸರಳವಾಗಿ ಹಾಗೂ ಕಡಿಮೆ ಜನಸ್ತೋಮದೊಂದಿಗೆ ನಡೆಯಲಿದೆ.
ನವೆಂಬರ್‌ನಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆಯಲಿದ್ದು, ಮದುವೆಯ ಬಳಿಕ ಹೈದರಾಬಾದ್‌ನಲ್ಲಿ ಚಿತ್ರರಂಗದ ಸ್ನೇಹಿತರಿಗಾಗಿ ವಿಶೇಷ ರಿಸೆಪ್ಷನ್ ಆಯೋಜಿಸಲು ತೀರ್ಮಾನಿಸಲಾಗಿದೆ.