Education
ಪರೀಕ್ಷಾ ಅಕ್ರಮದ ಆರೋಪಿಗಳಿಗೆ ಕೆಇಎ ಶಾಶ್ವತ ನಿರ್ಬಂಧ: ಸರ್ಕಾರಿ ನೌಕರಿ ಕನಸು ಭಗ್ನ

ಪರೀಕ್ಷಾ ಅಕ್ರಮದ ಆರೋಪಿಗಳಿಗೆ ಕೆಇಎ ಶಾಶ್ವತ ನಿರ್ಬಂಧ: ಸರ್ಕಾರಿ ನೌಕರಿ ಕನಸು ಭಗ್ನ

tv9kannada1h
THE BRIEF
1

ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿ ಸಿಕ್ಕಿಬೀಳುವ ಅಭ್ಯರ್ಥಿಗಳಿಗೆ ಇನ್ಮುಂದೆ ಕೆಇಎ ನಡೆಸುವ ಪರೀಕ್ಷೆಗಳಲ್ಲದೆ, ಕೆಪಿಎಸ್ಸಿ ಹಾಗೂ ಶಿಕ್ಷಣ ಇಲಾಖೆಯ ಪರೀಕ್ಷೆಗಳಿಗೂ ಶಾಶ್ವತವಾಗಿ ನಿಷೇಧ ಹೇರಲು ಕೆಇಎ ನಿರ್ಧರಿಸಿದೆ.

2

ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಹಾವೇರಿಯ ಶಂಕರ್ ಬನ್ನೂರು ಎಂಬುವವರಿಗೆ ಈಗಾಗಲೇ ಲೈಫ್ ಟೈಮ್ ಬ್ಯಾನ್ ವಿಧಿಸಲಾಗಿದ್ದು, ಇವರ ಮಾಹಿತಿಯನ್ನು ನೇಮಕಾತಿ ಮಂಡಳಿಗಳಿಗೆ ರವಾನಿಸಲಾಗಿದೆ.

3

ಪರೀಕ್ಷಾ ಅಕ್ರಮ ತಡೆಯಲು ಕೆಇಎ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದು, ಉತ್ತರ ಪತ್ರಿಕೆಗಳಲ್ಲಿ (OMR) ಅನುಮಾನಾಸ್ಪದವಾಗಿ ಖಾಲಿ ಬಿಟ್ಟಿರುವ 180 ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳನ್ನು ತನಿಖೆಗೆ ಒಳಪಡಿಸಲು ನಿರ್ಧರಿಸಲಾಗಿದೆ.