
ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿ ಸಿಕ್ಕಿಬೀಳುವ ಅಭ್ಯರ್ಥಿಗಳಿಗೆ ಇನ್ಮುಂದೆ ಕೆಇಎ ನಡೆಸುವ ಪರೀಕ್ಷೆಗಳಲ್ಲದೆ, ಕೆಪಿಎಸ್ಸಿ ಹಾಗೂ ಶಿಕ್ಷಣ ಇಲಾಖೆಯ ಪರೀಕ್ಷೆಗಳಿಗೂ ಶಾಶ್ವತವಾಗಿ ನಿಷೇಧ ಹೇರಲು ಕೆಇಎ ನಿರ್ಧರಿಸಿದೆ.
ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಹಾವೇರಿಯ ಶಂಕರ್ ಬನ್ನೂರು ಎಂಬುವವರಿಗೆ ಈಗಾಗಲೇ ಲೈಫ್ ಟೈಮ್ ಬ್ಯಾನ್ ವಿಧಿಸಲಾಗಿದ್ದು, ಇವರ ಮಾಹಿತಿಯನ್ನು ನೇಮಕಾತಿ ಮಂಡಳಿಗಳಿಗೆ ರವಾನಿಸಲಾಗಿದೆ.
ಪರೀಕ್ಷಾ ಅಕ್ರಮ ತಡೆಯಲು ಕೆಇಎ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದು, ಉತ್ತರ ಪತ್ರಿಕೆಗಳಲ್ಲಿ (OMR) ಅನುಮಾನಾಸ್ಪದವಾಗಿ ಖಾಲಿ ಬಿಟ್ಟಿರುವ 180 ಅಭ್ಯರ್ಥಿಗಳ ಒಎಂಆರ್ ಶೀಟ್ಗಳನ್ನು ತನಿಖೆಗೆ ಒಳಪಡಿಸಲು ನಿರ್ಧರಿಸಲಾಗಿದೆ.