
ತಮಿಳುನಾಡಿನ ಟಿವಿಕೆ ಸರ್ಕಾರ 2026-27ನೇ ಸಾಲಿನ ಬಜೆಟ್ ಮಂಡಿಸಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಶಿಶುಗಳಿಗೆ 1 ಗ್ರಾಂ ಚಿನ್ನದ ಉಂಗುರ ನೀಡುವ ಯೋಜನೆ ಘೋಷಿಸಿದೆ.
ಈ ಯೋಜನೆಗಾಗಿ 560 ಕೋಟಿ ರೂ. ಹಾಗೂ ವಧುಗಳಿಗೆ 8 ಗ್ರಾಂ ಚಿನ್ನದ ನಾಣ್ಯ ಮತ್ತು ಸೀರೆ ನೀಡುವ ಯೋಜನೆಗೆ 812 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲು 2,000 ಕೋಟಿ ರೂ. ಘೋಷಿಸಲಾಗಿದ್ದು, ರಾಜ್ಯದ ಒಟ್ಟು ಸಾಲ 10 ಲಕ್ಷ ಕೋಟಿ ರೂ. ಎಂದು ಶ್ವೇತಪತ್ರದಲ್ಲಿ ತಿಳಿಸಲಾಗಿದೆ.