
ಉತ್ತರ ಪ್ರದೇಶದ ಮಹಾರಾಜ ಚೇತ್ ಸಿಂಗ್ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಗರ್ಭಿಣಿಯನ್ನು ಮುಟ್ಟಲು ನಿರಾಕರಿಸಿದ ಪರಿಣಾಮ, 20 ವರ್ಷದ ರಾಣಿ ವನವಾಸಿ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.
ರಕ್ತಹೀನತೆ ಇದೆ ಹಾಗೂ ಆಸ್ಪತ್ರೆಯಲ್ಲಿ ರಕ್ತದ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಆಕೆಯನ್ನು ದಾಖಲಿಸಿಕೊಳ್ಳಲು ಸಿಬ್ಬಂದಿ ನಿರಾಕರಿಸಿದ್ದರು ಎಂದು ಸಿಎಂಒ ಸಂತೋಷ್ ಕುಮಾರ್ ಚಕ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪವೆಂದು ಸಾಬೀತಾದ ಹಿನ್ನೆಲೆಯಲ್ಲಿ ಗುತ್ತಿಗೆ ವೈದ್ಯ ಡಾ. ಪಂಕಜ್ ಕುಮಾರ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದ್ದು, ಇತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.