
ಅಮೆರಿಕ ಸುಪ್ರೀಂ ಕೋರ್ಟ್ ಟ್ರಂಪ್ ಆಡಳಿತದ ಸುಂಕ ನೀತಿಯನ್ನು ಕಾನೂನುಬಾಹಿರ ಎಂದು ಘೋಷಿಸಿದ ಬೆನ್ನಲ್ಲೇ, ಯುಎಸ್ ಸರ್ಕಾರ 100 ಶತಕೋಟಿ ಡಾಲರ್ ಮರುಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.
ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ ವರದಿಯ ಪ್ರಕಾರ, ಭಾರತದಿಂದ ರಫ್ತಾದ 10 ರಿಂದ 12 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳಿಗೆ ಈ ಸುಂಕ ಹಿಂಪಡೆಯುವ ನಿರ್ಧಾರ ಅನ್ವಯಿಸಲಿದೆ.
ಸಿಯೆಟ್, ಬಾಲಕೃಷ್ಣ ಇಂಡಸ್ಟ್ರೀಸ್ ಮತ್ತು ಗೋಕಲ್ದಾಸ್ ಎಕ್ಸ್ಪೋರ್ಟ್ಸ್ನಂತಹ ಅಮೆರಿಕದಲ್ಲಿ ಅಂಗಸಂಸ್ಥೆ ಹೊಂದಿರುವ ಭಾರತೀಯ ಕಂಪನಿಗಳು ತಾವು ಪಾವತಿಸಿದ್ದ ಹೆಚ್ಚುವರಿ ಸುಂಕವನ್ನು ಮರಳಿ ಪಡೆಯುವ ನಿರೀಕ್ಷೆಯಲ್ಲಿವೆ.