
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ 2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್, ಸಿಐಡಿ ತನಿಖಾಧಿಕಾರಿ ರಾಘವೇಂದ್ರ ಹೆಗಡೆ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಇಡಿ ದಾಳಿಯ ಸುಳಿವು ಸಿಗುತ್ತಿದ್ದಂತೆ ದೆಹಲಿಗೆ ಪರಾರಿಯಾಗಿದ್ದ ಜ್ಞಾನೇಂದ್ರ ಕುಮಾರ್, ತಂದೆಯ ಅನಾರೋಗ್ಯದ ಕಾರಣ ನೀಡಿ 15 ದಿನಗಳ ತುರ್ತು ರಜೆ ಕೋರಿದ್ದರು, ಆದರೆ ಅದು ಸುಳ್ಳೆಂದು ಸಾಬೀತಾಗಿತ್ತು.
ಸಿಐಡಿ ಅಧಿಕಾರಿಗಳು ಬೆಂಗಳೂರಿನ ಮನೆ ಮತ್ತು ಕಚೇರಿಗೆ ಸಮನ್ಸ್ ನೋಟಿಸ್ ಅಂಟಿಸಿದ ಬೆನ್ನಲ್ಲೇ, ಬಂಧನದ ಭೀತಿಯಿಂದ ಅಧಿಕಾರಿ ಕೊನೆಗೂ ತನಿಖೆಗೆ ಸಹಕರಿಸಲು ಮುಂದಾಗಿದ್ದಾರೆ.