ಹುಬ್ಬಳ್ಳಿಯ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಅಡಿಕೆ ದಾಸ್ತಾನು ರಸೀದಿಗಳನ್ನು ಅಡಮಾನವಿಟ್ಟು ₹3.50 ಕೋಟಿ ಸಾಲ ಪಡೆದು ಮರುಪಾವತಿಸದೆ ವಂಚಿಸಿದ ಆರೋಪದ ಮೇಲೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳು 1,800 ಚೀಲಗಳಲ್ಲಿ 1,450 ಕ್ವಿಂಟಲ್ ಅಡಿಕೆ ಇರುವುದಾಗಿ ಸುಳ್ಳು ದಾಖಲೆ ಸೃಷ್ಟಿಸಿ, 2024ರ ಆಗಸ್ಟ್ 1ರಿಂದ 8ರ ನಡುವೆ ತಲಾ ₹70 ಲಕ್ಷದಂತೆ ಸಾಲ ಪಡೆದಿದ್ದಾರೆ.
ಬ್ಯಾಂಕ್ ಅಧಿಕಾರಿಗಳು ಉಗ್ರಾಣ ಪರಿಶೀಲನೆಗೆ ತೆರಳಿದಾಗ ಆರೋಪಿಗಳು ಬೆದರಿಕೆ ಹಾಕಿದ್ದು, ಸಾಲದ ಭದ್ರತೆಯಾಗಿ ತೋರಿಸಿದ್ದ ಅಡಿಕೆ ಚೀಲಗಳನ್ನು ಬೇರೆಡೆಗೆ ಸಾಗಿಸಿ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.