ಗ್ರಾಹಕರಿಗೆ ಸುಳ್ಳು ಮಾಹಿತಿ ನೀಡುವ 'ಡಾರ್ಕ್ ಪ್ಯಾಟರ್ನ್ಸ್' ಅನುಸರಿಸಿದ ಜೆಪ್ಟೊ, ಫಿಸಿಕ್ಸ್ ವಲ್ಲಾಹ್ ಸೇರಿದಂತೆ ಏಳು ಕಂಪನಿಗಳಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ₹20 ಲಕ್ಷ ದಂಡ ವಿಧಿಸಿದೆ.
ಜೆಪ್ಟೊ ಕಂಪನಿಗೆ ಗರಿಷ್ಠ ₹7 ಲಕ್ಷ ದಂಡ ವಿಧಿಸಲಾಗಿದ್ದು, ಫಸ್ಟ್‌ಕ್ರೈ, ಫಾರ್ಮಾಈಸಿ, ಮ್ಯಾಕ್‌ಅಫೀ, ಅನುಜ್ ಜಿಂದಾಲ್ ಮತ್ತು ಸ್ಪೈಸ್‌ಜೆಟ್ ಕಂಪನಿಗಳಿಗೂ ದಂಡ ವಿಧಿಸಲಾಗಿದೆ.
ಇಂಟರ್‌ಗ್ಲೋಬ್ ಏವಿಯೇಷನ್ ಮತ್ತು ಬುಕ್‌ಮೈಶೋ ಕಂಪನಿಗಳಿಗೆ ಈ ಸಂಬಂಧ ನೋಟಿಸ್ ನೀಡಲಾಗಿದ್ದು, ಗ್ರಾಹಕರನ್ನು ದಾರಿ ತಪ್ಪಿಸುವ ಇ-ಕಾಮರ್ಸ್ ತಂತ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.