
ದೇಶದ ಯಾವುದೇ ರಾಜ್ಯಕ್ಕೆ ವಲಸೆ ಹೋದರೂ 'ಒಂದು ದೇಶ, ಒಂದು ಪಡಿತರ ಚೀಟಿ' (ONORC) ಯೋಜನೆಯ ಮೂಲಕ ಪಡಿತರ ಪಡೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ವಲಸೆ ಹೋದ ತಕ್ಷಣ ಹೊಸ ರೇಷನ್ ಕಾರ್ಡ್ ಪಡೆಯುವ ಅಥವಾ ಹಳೆಯ ಕಾರ್ಡ್ ರದ್ದುಪಡಿಸುವ ಅಗತ್ಯವಿರುವುದಿಲ್ಲ.
ಪಡಿತರ ಅಂಗಡಿಯಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ಬೆರಳಚ್ಚು ನೀಡಿ ಗುರುತು ಪರಿಶೀಲಿಸಿ ಸುಲಭವಾಗಿ ಆಹಾರ ಧಾನ್ಯ ಪಡೆಯಬಹುದು.