
ಸತತ ಇಳಿಕೆಯ ಬಳಿಕ ಶುಕ್ರವಾರ ಅಷ್ಟಮಿಯ ದಿನದಂದು ಚಿನ್ನ ಹಾಗೂ ಬೆಳ್ಳಿಯ ಮೌಲ್ಯದಲ್ಲಿ ಭರ್ಜರಿ ಹೆಚ್ಚಳವಾಗಿದೆ.
ಬೆಳ್ಳಿ ದರವು ಒಂದೇ ದಿನಕ್ಕೆ 5,000 ರೂಪಾಯಿ ಏರಿಕೆಯಾಗಿ ಒಂದು ಕೆ.ಜಿ.ಗೆ 1,50,000 ರೂಪಾಯಿಗೆ ತಲುಪಿದೆ.
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1,41,550 ರೂಪಾಯಿಗೆ ಹಾಗೂ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1,54,420 ರೂಪಾಯಿಗೆ ಏರಿಕೆ ಕಂಡಿದೆ.