
2027ರ ಏಕದಿನ ವಿಶ್ವಕಪ್ಗೆ ಸುನೀಲ್ ಗವಾಸ್ಕರ್ ಅವರು ಆಯ್ಕೆ ಮಾಡಿದ ಸಂಭಾವ್ಯ ಭಾರತ ತಂಡವನ್ನು ಆಕಾಶ್ ಚೋಪ್ರಾ ವಿಶ್ಲೇಷಿಸಿದ್ದು, ಶುಬ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ ಟಾಪ್ ಫೈವ್ ಬ್ಯಾಟರ್ಗಳಾಗಿದ್ದಾರೆ.
ಹಾರ್ದಿಕ್ ಪಾಂಡ್ಯ ಮತ್ತು ನಿತೀಶ್ ಕುಮಾರ್ ರೆಡ್ಡಿ ಆಲ್ ರೌಂಡರ್ಗಳಾಗಿದ್ದು, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಸ್ಪಿನ್ ಬೌಲಿಂಗ್ ಆಲ್ ರೌಂಡರ್ಗಳಾಗಿ ಆಯ್ಕೆಯಾಗಿದ್ದಾರೆ.
ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್ ಬೌಲರ್ಗಳಾಗಿದ್ದು, ಈ ತಂಡಕ್ಕೆ 10ಕ್ಕೆ 8.5 ಅಥವಾ 9 ಅಂಕ ನೀಡಬಹುದು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.