
ಕೊಲಂಬೊ ಟೆಸ್ಟ್‌ನಲ್ಲಿ 63 ರನ್ ಗಳಿಸುವ ಮೂಲಕ ರಿಷಭ್ ಪಂತ್ ಡಬ್ಲ್ಯೂಟಿಸಿ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಪಂತ್ 74 ಇನ್ನಿಂಗ್ಸ್‌ಗಳಲ್ಲಿ ಒಟ್ಟು 2,948 ರನ್ ಗಳಿಸಿದ್ದು, ಈ ಮೂಲಕ 76 ಇನ್ನಿಂಗ್ಸ್‌ಗಳಲ್ಲಿ 2,917 ರನ್ ಗಳಿಸಿದ್ದ ಶುಭ್ಮನ್ ಗಿಲ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ 2,716 ರನ್, ರವೀಂದ್ರ ಜಡೇಜಾ 2,675 ರನ್ ಮತ್ತು ವಿರಾಟ್ ಕೊಹ್ಲಿ 2,617 ರನ್ ಗಳಿಸಿ ನಂತರದ ಸ್ಥಾನಗಳಲ್ಲಿದ್ದಾರೆ.