
ಕಳೆದ 26 ವರ್ಷಗಳಿಂದ ದಸರಾದ ಅವಿಭಾಜ್ಯ ಅಂಗವಾಗಿದ್ದ 60 ವರ್ಷ ವಯಸ್ಸಿನ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಬುಧವಾರ ಕೊನೆಯ ಬಾರಿಗೆ ಜಂಬೂಸವಾರಿಯಲ್ಲಿ ನಿಶಾನೆ ಆನೆಯಾಗಿ ಪಾಲ್ಗೊಂಡಿದ್ದಾನೆ.
ಸಾರ್ವಜನಿಕರ ತೀವ್ರ ಬೇಡಿಕೆಗೆ ಮಣಿದ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಯು ಅಭಿಮನ್ಯುವಿಗೆ ಈ ವಿಶೇಷ ಅವಕಾಶ ಕಲ್ಪಿಸಿಕೊಟ್ಟಿತು.
ಅಭಿಮನ್ಯು ಇದುವರೆಗೆ ಸುಮಾರು 300ಕ್ಕೂ ಹೆಚ್ಚು ಕಾಡು ಪ್ರಾಣಿಗಳನ್ನು ಹಾಗೂ 80ಕ್ಕೂ ಹೆಚ್ಚು ನರಭಕ್ಷಕ ಪ್ರಾಣಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದ್ದಾನೆ.