
ಅಂತರರಾಷ್ಟ್ರೀಯ ಬದಲಾವಣೆಗಳಿಂದಾಗಿ ಕಳೆದ ಒಂದು ವಾರದಲ್ಲಿ ಚಿನ್ನದ ಬೆಲೆಯು ಬರೋಬ್ಬರಿ ₹5,000 ಇಳಿಕೆಯಾಗಿದ್ದು, ಅಕ್ಟೋಬರ್ 3ರಂದು ಕೂಡ ವಿವಿಧ ಕ್ಯಾರೆಟ್ ಬಂಗಾರದ ದರ ಕಡಿತಗೊಂಡಿದೆ.
ಅಕ್ಟೋಬರ್ 3ರಂದು 22 ಕ್ಯಾರೆಟ್ ಚಿನ್ನವು 10 ಗ್ರಾಂಗೆ ₹1,36,750 ಹಾಗೂ 24 ಕ್ಯಾರೆಟ್ ಚಿನ್ನವು 10 ಗ್ರಾಂಗೆ ₹1,49,180 ತಲುಪಿದ್ದು, ಬೆಳ್ಳಿ ಬೆಲೆ ಯಥಾಸ್ಥಿತಿ ಮುಂದುವರಿದಿದೆ.
ಚಿನ್ನದ ಬೆಲೆ ನಿರಂತರ ಇಳಿಕೆಯಿಂದ ಬಂಗಾರ ಪ್ರಿಯರು ಸಂತೋಷಗೊಂಡಿದ್ದರೆ, ಹೂಡಿಕೆದಾರರಲ್ಲಿ ಆತಂಕ ಎದುರಾಗಿದ್ದು, ಪ್ರತಿ ಗ್ರಾಂ ಮೇಲೆ ವಿವಿಧ ಕ್ಯಾರೆಟ್ಗಳಲ್ಲಿ ₹82 ರಿಂದ ₹110 ರಷ್ಟು ಇಳಿಕೆಯಾಗಿದೆ.